Psalms 129

ಯೆಹೋವನು ತನ್ನ ಭಕ್ತರನ್ನು ಶತ್ರುಗಳಿಂದ ಬಿಡಿಸುವನೆಂಬ ನಿರೀಕ್ಷೆ

ಯಾತ್ರಾಗೀತೆ.

(ಕೀರ್ತ. 124)

1<<ನಮ್ಮ ಯೌವನ ಕಾಲದಿಂದ ಶತ್ರುಗಳು ನಮ್ಮನ್ನು ಹಲವು ಸಾರಿ ಬಾಧಿಸಿದ್ದಾರೆ>>
ಎಂದು ಇಸ್ರಾಯೇಲರು ಹೇಳಲಿ.
2 <<ನಾವು ಯೌವನ ಕಾಲದಿಂದ ಎಷ್ಟೋ ಸಾರಿ ಬಾಧೆ ಹೊಂದಿದರೂ,
ಅವರು ನಮ್ಮನ್ನು ಜಯಿಸಲಿಲ್ಲ.
3 ಉಳುವವರು ನಮ್ಮ ಬೆನ್ನಿನ ಮೇಲೆ ಉಳುತ್ತಾ,
ಉದ್ದವಾದ ಗೆರೆಗಳನ್ನು ಹಾಕಿದರು.>>

4

ಆದರೆ ನೀತಿಸ್ವರೂಪನಾದ ಯೆಹೋವನು,

ದುಷ್ಟರು ಹಾಕಿದ ಬಂಧನಗಳನ್ನು ಛೇದಿಸಿಬಿಟ್ಟನು.
5 ಚೀಯೋನನ್ನು ದ್ವೇಷಿಸುವವರೆಲ್ಲರೂ ಅವಮಾನದಿಂದ ಹಿಂದಿರುಗಲಿ.

6

ಅವರು ಮಾಳಿಗೆಯ ಮೇಲಣ ಹುಲ್ಲಿನಂತಾಗಲಿ;

ಅದು ಹೂವು ಬಿಡುವುದಕ್ಕೆ ಮೊದಲೇ ಒಣಗಿಹೋಗುತ್ತದೆ;
7 ಅದನ್ನು ಕೊಯ್ಯುವವನ ಹಿಡಿಯೂ,
ಸಿವುಡು ಕಟ್ಟುವವನ ಉಡಿಲೂ ತುಂಬುವುದಿಲ್ಲ.
8 ಹಾದುಹೋಗುವವರು, <<ಯೆಹೋವನು ನಿಮ್ಮನ್ನು ಆಶೀರ್ವದಿಸಲಿ ಎಂದು,
ಯೆಹೋವನ ನಾಮದಲ್ಲಿ ನಿಮ್ಮನ್ನು ಆಶೀರ್ವದಿಸುತ್ತೇವೆ>> ಎಂದೂ ಹೇಳುವುದಿಲ್ಲ.

Copyright information for KanULB